Sri GuruSarvabhouma DasaSahitya Project





BIDUVENENAYYA HANUMA NINNA BIDUVENENAYYA -VENKATA VITTALA DASARU

(Venkata Vittala)






ಬಿಡುವೆನೆನಯ್ಯ ಹನುಮ ನಿನ್ನ ಬಿಡುವೆನೆನಯ್ಯ ||| |

ಬಿಡುವೆನೇನೋ ಹನುಮ ನಿನ್ನ ಅಡಿಗಳಿಗೆ ಎರಗುವೆ ನಾನು
ದೃಢಭಕ್ತಿಸುಜ್ಞಾನವನ್ನು ತಡಮಾಡದಲೆ ಕೊಡುವೋ ತನಕ ||ಅ.ಪ||

ಹಸ್ತವ ಮ್ಯಾಲಕೆ ಎತ್ತಿದರೇನು ಹಾರಗಾಲ ಹಾಕಿದರೇನು
ಭೃತ್ಯನು ನಿನ್ನವನು ನಾನು ಹಸ್ತಿವರದನ ತೋರೋ ತನಕ ||೧||

ಹಲ್ಲುಮುಡಿಯ ಕಚ್ಚಿದರೇನು ಗುಲ್ಲು ಮಾಡಿದರಂಜುವನಲ್ಲ
ಪುಲ್ಲನಾಭಶ್ರೀಲಕುಮೀಲೋಲನ ಇಲ್ಲಿಗೆ ತಂದು ತೋರುವ ತನಕ ||೨||

ಡೊಂಕುಮೋರೆಯಿಂ ಬಾಲವ ತಿದ್ದಿ ಹುಂಕರಿಸಿದರೆ ಅಂಜುವನಲ್ಲ
ಕಿಂಕರನು ನಿನ್ನವನೋ ನಾನು ವೆಂಕಟವಿಠಲನ ತೋರುವ ತನಕ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;