Sri GuruSarvabhouma DasaSahitya Project





YATIKULAMBUJANIJATARANI-GURU JAGANNATHA DASARU

(Guru Jagannatha Vittala)






ಯತಿಕುಲಾಂಬುಜನಿಜತರಣಿ | ಸದಾ ನುತಿಪ ಸುಜನರಿಗೆ ದೊರೆವೋನು ಕರುಣಿ ||ಪ||

ಕ್ಷಿತಿಯೊಳಗೆ ಮಣಿಮಂತ ಮೊದಲಾ-| ದತಿದುರಾತ್ಮರ ತತಿಯ ಖಂಡ್ರಿಸಿ |
ವಿತತನಿಜಹರಿಮತವ ಸ್ಥಾಪಿಸಿ-| ದತುಳಮಹಿಮನ ಸತತ ಸ್ಮರಿಸುವೆ ||ಅ.ಪ||

ಹನುಮ ಭೀಮ ಮಧ್ವರಾಯನೆಂದು | ತನುತ್ರಯದಿಂದಲಿ ಜನಿಸಿದ, ತೋಯ-|
ತನುಜಸಂಭವದೇವಿ ಕಾಯ ನೋಡಿ | ದನುಜಕೌರವರ ಕೊಂದನು ಭೀಮರಾಯ |
ದಿನಕರ್ವಂಶಜ ಪಾದಕಮಲಕೆ | ಹನುಮ ಭಾಸ್ಕರನೆನಿಪ, ಭೀಮನು |
ಮನದಿ ಕ್ರುಷ್ಣರ ಭಜಿಪ, ವ್ಯಾಸರ | ಅಣುಗನೆನಿಸುತ ಘನದಿ ಮೆರೆದನು ||೧||

ರಾವಣಿಹಂತಕಹನುಮ ನೆನಿಸಿ | ಶೈವರಾಗ್ರಣಿಜರಾಸಂಧಾರಿಭೀಮ |
ಪಾವನಾತ್ಮಕ ಮಧ್ವನಾಮ, ನಾನೆ | ದೇವರೆಂತೆಂಬೊ ಸಂಕರನ ನಿರ್ಧೂಮ |
ದೇವನನುಜಗೆ ಜೀವನಿತ್ತನು | ದೇವಿಮೊರೆಯನು ಕೇಳಿ ಕುರುಗಳ |
ಜೀವಹನನವ ಗೈದ ಭೀಮನು | ಶೈವಶಾಸ್ತ್ರವ ಮುರಿದ ಮಧ್ವನು ||೨||

ಜಗಕೆ ಜೀವನನೆನಿಪ ಪ್ರಾಣದೇವ | ನಗವೈರಿಮಗನಿಗೆ ನಿರುತಸಂತ್ರಾಣ |
ಬಗೆ ಬಗೆ ವಿಧದ ಪ್ರಮಾಣದಿಂದ | ಜಗದಿ ಮೆರೆದ ಪದವಾಕ್ಯಪ್ರವೀಣ |
ಮುಗಿವೆ ಹಸ್ತದ್ವಯವ ಶಾಖಾ | ಮೃಗ, ನರಾಧಿಪ, ನಿಗಮನಿರ್ಣಯ,-|
ಜಗಕೆ ಗುರುಜಗನ್ನಾಥವಿಠಲನು ನಿಗಮವಾಕ್ಯದಿ ನಗುತ ಪೇಳಿದ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;