Sri GuruSarvabhouma DasaSahitya Project

PAVAMANA JAGADA PRANA SAMKARUSHANA--VIJAYA DASARU

(Vijaya Vittala)


ಪವಮಾನ ಜಗದ ಪ್ರಾಣ ಸಂಕರುಷನ-|
ಭವನೆ ಭವಾರಣ್ಯದಹನ ಪವನ ||ಪ||

ಶ್ರವಣವೆ ಮೊದಲಾದ ನವವಿಧಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ.ಪ||

ಹೇಮಕಚ್ಚೂತ ಉಪವೀತ-ಧರಿಪ ಮಾರುತ
ಕಾಮಾದಿವರ್ಗರಹಿತ
ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭಿತ
ರಾಮಚಂದ್ರನ ನಿಜದೂತ
ಯಾಮಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದನೇಮಿಸಿ ಪ್ರತಿದಿನ
ಈ ಮನಸಿಗ ಸುಖಸ್ತೋಮವ ತೋರುತ
ಪಾಮರಮತಿಯನು ನೀ ಮಾಣಿಪುದು ||೧||

ವಜ್ರಶರೀರ ಗಂಭೀರ-ಮಕುಟಧರ
ದುರ್ಜನವನಕುಠಾರ
ನಿರ್ಜರಮಣಿ ದಯಾಪಾರಾವಾರ ಉದಾರ
ಸಜ್ಜನರಘಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ-
ಮಾಜ್ಜನದಲಿ ಭವವರ್ಜಿತನೆನಿಸೊ ||೨||

ಪ್ರಾಣ ಅಪಾನ ಉದಾನ- ವ್ಯಾನ ಸಮಾನ
ಆನಂದ ಭಾರತೀರಮಣ
ನೀನೆ ಶರ್ವಾದಿಗೀರ್ವಾಣಾದ್ಯಮರರಿಗೆ ಜ್ಞಾನ
ಧನಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದ
ಮಾನಸಾದಿಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಶ್ರೀವಿಜಯವಿಠ್ಠಲನ
ಕಾಣಿಸಿ ಕೊಡುವುದು ಭಾನುಪ್ರಕಾಶ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;