Sri GuruSarvabhouma DasaSahitya Project





PRANADEVA NINALLADE KAYVA KANENU LOKADOLAGE-JAGANNATHA DASARU

(Jagannatha Vittala)






ರಾಗ- ತಾಳ-
ಪ್ರಾಣದೇವ ನೀನಲ್ಲದೆ ಕಾಯ್ವರ | ಕಾಣೆ ಲೋಕದೊಳಗೆ ಮುಖ್ಯ-||ಪ||
ಪ್ರಾಣೋಪಾನವ್ಯಾನೋದಾನ ಸಮಾನನೆನಿಪ ಮುಖ್ಯ||ಅ.ಪ||

ವಾಸವ ಕುಲಿಶದಿ ಘತಿಸೆ ಜೀವರ| ಶ್ವಾಸನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು | ನೀ ಸಲಹಿದೆ ಜಗವಾ ಮುಖ್ಯ ||೧||

ಅಂಗದಪ್ರಮುಖಪ್ಲವಂಗರು ರಾಮನ | ಅಂಗನೆಯನು ಪುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿಗಳ | ಜಂಗುಳಿ ಪಾಲಿಸಿದೆ ಮುಖ್ಯ||೨||

ಪಾವಿನ ಪಾಶದಿ ರಾವಣಿ ನೀಲಸು-| ಗ್ರೀವಮುಖ್ಯರ ಬಿಗಿಯೆ |
ಸಾವಿರದೈವತ್ತುಗಾವುದದಲ್ಲಿಹ ಸಂ-| ಜೀವನ ಜವದಿ ತಂದೆ ಮುಖ್ಯ||೩||

ಪರಿಸರ ನೀನಿರೆ ಹರಿತಾನಿಪ್ಪನು | ಇರದಿರೆ ತಾನಿರನು |
ಕರಣನಿಯಾಮಕ ಸುರರ ಗುರುವೆ ನೀ | ಕರುಣಿಸೆ ಕರುಣಿಸುವ ||೪||

ಭೂತೇಂದ್ರಿಯದಧಿನಾಥನಿಯಾಮಕ | ಆ ತೈಜಸಹರನಾ |
ತಾತನೇನಿಪ ಜಗನ್ನಾಥವಿಠಲನ | ಪ್ರೀತಿಪಾತ್ರನಾದ ಮುಖ್ಯ ||೫||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;