Sri GuruSarvabhouma DasaSahitya Project

AVARUPAVA NODI MARALADE IMTHA-GURU JAGANNATHA DASARU

(Guru Jagannatha Vittala)ಆವರೂಪವ ನೋಡಿ ಮರಳಾದೆ ಇಂಥ | ದೇವವರಗೆ ಹಾರ ನೀಡಿದೆ ||ಪ||

ಸೇವಕಜನಗಳ ಸೇವೆಗೆ ದೊರೆಯದೆ ಗೋವರ ಮನಿಮಹಾದೈವನಾದವಗೆ ||ಅ.ಪ||

ವೇದಚೊರನ ಕೊಂದ ಶೂರಗೆ ಭಾರ-| ವಾದ ಗಿರಿಯ ಪೊತ್ತ ಧೀರಗೆ |
ಮೇದಿನಿ ತಂದಿಹ ವೀರಗೆ ಮಹ- | ಆದಿದೈತ್ಯರ ಕೊಂದ ಕ್ರೂರಗೆ ||
ಬೋಧಗಾರ ಶುದ್ಧಕುಧರನುದ್ಧಾರಗೆ | ಭೂಧರ ವರಘೋರರೂಪನಾದವಗೆ ||೧||

ಧರೆಯನಳೆದ ಅಳತಿಗಾರಗೆ ತಾಯಿ | ಶಿರವ ತರಿದ ಮೋಸಗಾರಗೆ
ಶರಧಿಗಟ್ಟಿದ ಸೇತುಗಾರಗೆ ಬಹು | ಹರದಿಯರಿಗೆ ವಿಟಗಾರಗೆ |
ತಿರುಕರೂಪಗೆ ಪರಶುಧರ ವನಚರಗೆ | ಖರಾಸುರ ವೈರಿಗೆ ಕಂಸಮರ್ದನಗೆ ||೨||

ವೀತವಸನ ಬಂಡಗಾರಗೆ ಬಹು | ಪಾತಕರೊಳು ಪುಂಡಗಾರಗೆ
ನೀತಸತಿವ್ರತ ಹಾರಗೆ ಖಳ-| ಜಾತಿಜನರ ಸಂಹಾರಗೆ |
ಮಾತುಗಾರ ಬಹುಪ್ರೀತಿಗಾರ ನಮ್ಮ | ಖ್ಯಾತ ಶ್ರೀಗುರುಜಗನ್ನಾಥವಿಠಲಗೆ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;