Sri GuruSarvabhouma DasaSahitya Project

NARASIMHA PAHILAKSHMI NARASIMHA-JAGANNATHA DASARU

(Jagannatha Vittala)


ನರಸಿಂಹ ಪಾಹಿಲಕ್ಷ್ಮೀ ನರಸಿಂಹ ||ಪ||

ನರಸಿಂಹ ನಮಿಪೆ ನಾ ನಿನ್ನ | ಚಾರು
ಚರಣ ಕಮಲಕೆ ನೀ ಎನ್ನ | ಆಹಾ |
ಕರವ ಪಿಡುದು ನಿಜ ಶರಣನೆಂದೆನಿಸು ಭಾಸುರ
ಕರುಣಾಂಬುಧಿ ಗರುಡವಾಹನ ಲಕ್ಷ್ಮೀನರಸಿಂಹ ||ಅ.ಪ||

ತರಳ ಪ್ರಹ್ಲಾದನ ನುಡಿಯ ಕೇಳಿ |
ತ್ವರಿತದಿ ಬಂದ್ಯೋ ಎನ್ನೊಡೇಯ ಅನು |
ಕರುಣಾಳು ಭಕ್ತರ ಭಿಡೆಯ ಮೀರಲರಿಯನೆಂದೆಂದು ಕೆಂಗಿಡಿಯ || ಆಹಾ |
ಭರದಿಂದುಗುಳುತ ಬೊಬ್ಬಿರಿದು ಬೆಂಬತ್ತಿ ಕ-|
ರ್ಬುರಶಶ್ಯಪುವಿನ ಹಿಂಗುರುಳ ಪಿಡಿದೆ ಲಕ್ಷ್ಮೀನರಸಿಂಹ ||೧||

ಪ್ರಳಯಾಂಬುನಿಧಿ ಘನ ದೋಷದಂತೆ |
ಘುಳಿಘುಳಿಸುತಲಿ ಪ್ರದೊಷ | ಕಾಲ
ತಿಳಿದು ದೈತ್ಯನಲ್ಲತಿ ರೊಷ ದಿಂದ | ಅಪ್ಪಳಿಸಿ ಮೇದಿನಿಗೆ ನಿರ್ದೋಷ || ಆಹಾ |
ಸೇಳೆದೆಳೆಯುತ ಚರ್ಮಸುಲಿದು ಕೆನ್ನೆತ್ತರೋ-|
ಕುಳಿಯನಾಡಿದೆ ದಿಶಾವಳಿಗಳೊಳಗೆ ಲಕ್ಷ್ಮೀನರಸಿಂಹ ||೨||

ಕ್ರೂರ ದೈತ್ಯರ ಥೋರಗರುಳ ತೆಗೆ-|
ದ್ಹಾರ ಮಾಡಿದೆ ನಿಜ ಕೊರಳ ಕಂಡು |
ವಾರಿಜಾಸನ ಮುಖ್ಯರರಳ-ಪುಷ್ಪ ಭೂರಿಗರಿಯೆ ವೇಗ ತರಳ || ಆಹಾ |
ಧೀರ ಪ್ರಲ್ಹಾದಂಗೆ ತೋರಿತ್ವದಂಘ್ರಿ ಸ-|
ರೋರುಹವನೆ ಕಾಯ್ದೆ ಕಾರುಣ್ಯ ನಿಧಿ ಲಕ್ಷ್ಮೀನರಸಿಂಹ ||೩||

ಜಯ ಜಯ ದೇವ ವರೇಣ್ಯ ಮಹದ್ಭಯ ನಿವಾರಣ ಅಗ್ರಗಣ್ಯ |
ಗುಣತ್ರಯ ದೂರ ದುರಿತಾರಣ್ಯ ಧನಂಜಯ ಜಗದೇಕ ಶರಣ್ಯ | ಆಹಾ |
ಲಯವಿವರ್ಜಿತ ಲೋಕತ್ರಯವ್ಯಾಪ್ತ ನಿಜಭಕ್ತ |
ಪ್ರಿಯ ಘೋರಾಮಯ ಹರ ದಯಮಾಡೆನ್ನೂಳು ಲಕ್ಷ್ಮೀನರಸಿಂಹ ||೪||

ಕುಟಿಲ ದ್ವೆಷದಲಿ ನೀನಲ್ಲ ನಿನ್ನಾ-|
ರ್ಬಟಕಂಜಿದರು ಸುರರೆಲ್ಲ ನರ ನಟನೆ ಮಾಡಿದ್ಯೋ ಲಕ್ಷ್ಮೀ ನಲ್ಲ | ನಾಪಾ-|
ಸಟಿಗಾಣೆನಪ್ರತಿಮಲ್ಲ || ಆಹಾ |
ವಟಪತ್ರಶಯನ ಧೂರ್ಜಟಿ ವಂದ್ಯ ಜಗನ್ನಾಥವಿಠ್ಠಲ ಕೃತಾಂಜಲಿ
ಪುಟದಿ ಬೇಡುವೆ ಲಕ್ಷ್ಮೀನರಸಿಂಹ ||೫||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;