Sri GuruSarvabhouma DasaSahitya Project





KARISO DHIKKARISO ADARISO HYAGADADU BARUVE NINNADIGE NA BARUVE -GOPALA DASARU

(Gopala Vittala)






ಕರಿಸೋ ಧಿಕ್ಕರಿಸೋ ಆದರಿಸೋ ಹ್ಯಾಗಾದದೂ ಬರುವೆ ನಿನ್ನಡಿಗೆ ನಾ ಬರುವೆ ||ಪ||

ತಿರುಮಲೇಶನೆ ನಿನ್ನ ಪದ ಸಂದರುಶನವು ಇಲ್ಲದಲೆ ಇಂದಿಗೆ |
ವರುಷ ಸಂಪೂರ್ತ್ಯಾಯ್ತು ಮನ ಎಧ್ಹರಿಧ್ಹರಿದು ನಿನಗೆರಗುತಿದೆ ಮನ,ಕರಿಸೋ ||ಅ.ಪ||

ಪಿಡಿದು ತಾಳಗಳ ತಮ್ಮಡಿಗಳೊಳಗೆ ಗೆಜ್ಜೆ ಕಟ್ಟಿ, ಗೆಜ್ಜೆ ಕಟ್ಟಿ ಆರ್ಭಟಿಸಿ ಮನಮುಟ್ಟಿ |
ಜಡೆಗರಿಯೆ ಶುಕ ಭಾಷ್ಪಪುಲ್ಕಸ ಒಡಲಗಂಟಲ ಬಿಗಿದು ಮೃದು ತೊದಲ್ನುಡಿಗಳನು
ನುಡಿಸುವರ ಕಾಣದೆ ವಡುವುತಿದೆ ಎನ್ನ ಕಂಗಳೀ ಕೊನೆ, ಕರಿಸೋ ||೧||

ದುರ್ವಾದಿಗಳು ನಿನ್ನ ಸರ್ವೋತ್ತಮತವ ಧಿಕ್ಕರಿಸೆ | ಧಿಕ್ಕರಿಸೆ ದುರ್ಮತವ ಕಿಕ್ಕರಿಸೆ |
ಹರಿಯೇ ನೀ ಸರ್ವೋತ್ತಮನು ಎಂದರಿದು ಡಂಗುರ ಹೊಯ್ಸಿ |
ಸಾರುವ ಪರಮ ಭಾಗವತರಂಘ್ರಿ ಪಾಂಸಕೆ ತ್ವರಬಡಿಸುತಿದೆಯನ್ನ ಈ ಶಿರ ||೨||

ಬಗೆ ಬಗೆ ರತುನಗಳ್ ಬಿಗಿದ ವಾಹನಗಳನೇರಿ | ರಥವೇರಿ ಊದಿಸಲು ತುತ್ತೂರಿ ||
ಹಗಲು ಪಂಜಿನ ಬೆಳಕಿನಲಿ ಝಗಝಗಗಿಪ ಹಾರಾವಳಿಯ ಬಿಳಿ ಛತ್ರಿಗಳ ನೆರಳಲಿ
ಬರುವ ಚೆಲುವ ಚೆನ್ನಿಗನೆ ವೇಣು ಗೋಪಾಲವಿಠಲನೆ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;