Sri GuruSarvabhouma DasaSahitya Project





RAMA HARE HARE RAMAHARE-VARADESHA DASARU

(Varadesha Vittala)






ರಾಮ ಹರೇ ಹರೇ ರಾಮಹರೆ | ಕ್ರುಷ್ಣಹರೇ ಹರೇ ಕ್ರುಷ್ಣ ಹರೇ ||

ಕೌಸಲ್ಯಜವರವಂಶೋದ್ಭವ ಸುರಸಂಸೇವಿತಪದ ಶ್ರೀರಾಮ ಹರೇ |
ಕಂಸಾದ್ಯಸುರರ ಧ್ವಂಸಗೈದ ಯದುವಂಶೋದ್ಭವ ಶ್ರೀಕ್ರುಷ್ಣ ಹರೇ ||೧||

ಮುನಿಮಖರಕ್ಷಕ ದನುಜರಶಿಕ್ಷಕ ಫಣಿಧರಸನ್ನುತ ರಾಮಹರೇ |
ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನಪಿತ ಕ್ರುಷ್ಣ ಹರೇ ||೨||

ಶಿಲೆಯ ಪಾದರಜದಿ ಸ್ತ್ರೀಮಾಡಿದ ಸುಲಲಿತಗುಣನಿಧಿ ರಾಮ ಹರೇ |
ಬಲುವಕ್ರಾಗಿದ್ದಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಕ್ರುಷ್ಣ ಹರೇ ||೩||

ಹರಧನುಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀರಾಮ ಹರೇ |
ಸಿರಿರುಕ್ಮಿಣಿಯನು ತ್ವರದಲಿ ಒಲಿಸಿದ ಶರಣರ ಪಾಲಕ ಶ್ರೀ ಕ್ರುಷ್ಣ ಹರೇ ||೪||

ಜನಕ ಪೇಳೆ ಲಕ್ಷಣ ಸೀತಾ ಸಹ ವನಕೆ ತೆರಳಿದ ಶ್ರೀರಾಮ ಹರೇ |
ವನಕೆ ಪೂಗಿ ತನ್ನಣುಗರೊಡನೆ ಗೋವನು ಪಾಲಿಪ ಕ್ರುಶ್ಣ ಹರೇ ||೫||

ತಾಟಕಿಖರಮಧುಕೈಟಭಾರಿ ಪಾಪಾಟವಿಸುರಮುಖ ರಾಮ ಹರೇ |
ಆಟದಿ ಫಣಿವು ನಾಟ್ಯವನಾಡಿದ ಖೆಟವಾಹ ಕ್ರುಷ್ಣ ಹರೇ ||೬||

ಚದುರೆ ಶಬರಿಯಿತ್ತ ಬದರಿಯ ಫಲನು ಮುದದಿ ಸೇವಿಸಿದ ರಾಮ ಹರೇ |
ವಿದುರನ ಕ್ಷೀರಕೆ ವದಗಿ ಪೋದ ಶ್ರೀಪದುಮನಾಭ ಜಯ ಕ್ರುಷ್ಣ ಹರೇ ||೭||

ಸವಿತಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ |
ದೇವಕಿವಸುದೇವರ ಸೆರೆಬಿಡಿಸಿದ ದೇವ ದೇವ ಶ್ರೀ ಕ್ರುಷ್ಣ ಹರೇ ||೮||

ಗಿರಿಗಳಿಂದ ವರಶರಧಿ ಬಂಧಿಸಿದ ಪರಮಸಮರ್ಥ ಶ್ರೀರಾಮ ಹರೇ |
ಗಿರಿಯ ತನ್ನ ಕಿರಿಬೆರಳಿಲೆತ್ತಿ ಗೋಪರನ ಕಾಯ್ದ ಕ್ರುಷ್ಣ ಹರೇ ||೯||

ಖಂಡಿಸಿ ದಶಶಿರ ಚಂಡಾಡಿದ ಕೋದಂಡಪಾಣಿ ಶ್ರೀರಾಮ ಹರೇ
ಪಾಂಡುತನಯರಿಂ ಚಂಡಕೌರವರ ದಿಂಡುಗೆಡಹಿಸಿದ ಶ್ರೀ ಕ್ರುಷ್ಣಾ ಹರೇ ||೧೦||

ತವಕದಯೋಧ್ಯಾಪುರಕೈದಿದ ತನ್ಯುವತಿಯೊಡನೆ ಶ್ರೀರಾಮ ಹರೇ
ರವಿಸುತತನಯಗೆ ಪಟ್ಟವಗಟ್ಟಿದ ಭವತಾರಕ ಕ್ರುಷ್ಣ ಹರೇ ||೧೧||

ಭರತನು ಪ್ರಾರ್ಥಿಸಲರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮ ಕೃಪಾಕರ ಕ್ರುಷ್ಣ ಹರೇ ||೧೨||

ಧರೆಯೊಳಜ್ಞಜನರನು ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ
ಹರನ ಪ್ರಾರ್ಥಿಸಿ ವರವನು ಪಡೆದಾ ಚರಿತೆಯಗಾಧವು ಕ್ರುಷ್ಣ ಹರೇ ||೧೩||

ಅತುಳಮಹಿಮ ಸದ್ಯತಿಗಳ ಹೃದಯದಿ ಸತತವಿರಾಜಿಪ ರಾಮ ಹರೇ
ಸಿತವಾಹನಸಾರಥಿಯೆನಿಸಿದ ಸುರತತಿಪೂಜಿತಪದ ಕ್ರುಷ್ಣ ಹರೇ ||೧೪||

ರಾಮ ರಾಮ ಯಂದುನೇಮದಿ ಭಜಿಪರ ಕಾಮಿತಫಲದ ಶ್ರೀರಾಮ ಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀವರದೇಶವಿಠಲ ಕ್ರುಷ್ಣ ಹರೇ ||೧೫||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;