Sri GuruSarvabhouma DasaSahitya Project

PARAMAPURUSHA HARI GOVIMDA-KANAKA DASARU

(later)


ಪರಮಪುರುಷ ಹರಿ ಗೋವಿಂದ | ಕರಿವರದ ನಾರಾಯಣ ಗೋವಿಂದ ||ಪ||

ನಾರಾಯಣ ನಾರಾಯಣ ನಾರಾಯಣ ಹರಿ ನಾರಾಯಣ ನಾರಾಯಣ ನಾರಾಯಣ ||
ನಿಶಿಪೆಸರಸುರನ ಉಸುರ ತೊಲಗಿಸಿದ ಕುಸುಮಶರನ ಪಿತ ಗೋವಿಂದ |
ರಸಪೂರಿತಶ್ರುತಿ ಮಸುಳಿಸದಲೆ ತಂದು ಬಿಸಜಸಂಭವಗಿತ್ತೆ ಗೋವಿಂದ ||೧||

ಜತನತಪ್ಪದೆ ಅಮೃತಮಥನದಿ ಪರ್ವತವನುದ್ದರಿಸಿದ ಗೋವಿಂದ |
ಶತಕ್ರತುವಿನ ಶಿರಿ ಹತವಾಗೆ ಕಡಲನು ಮಥಿಸಿ ನಿಲ್ಲಿಸಿ ಕೊಟ್ಟೆ ಗೋವಿಂದ ||೨||

ಭೂತಳವೆರಸಿ ರಸಾತಳಕಿಳಿದನ ಪಾತಾಳದಿ ಕಂಡೆ ಗೋವಿಂದ |
ಆತನೊಡನೆ ಕಾದಿ ಖ್ಯಾತಿಲಿ ಮಡುಹಿ ಮಹೀತಳವನು ತಂದೆ ಗೋವಿಂದ ||೩||

ದುರುಳದೈತ್ಯನ ಸೀಳಿ ಕರುಳಮಾಲೆಯ ಮುಂಗೊರಳೊಳು ಧರಿಸಿದೆ ಗೋವಿಂದ |
ಗರಳಕಂಧರ ವಿಧಿ ಕರವೆತ್ತಿ ಪೊಗಳಲು ತರಳಗಭಯವಿತ್ತೆ ಗೋವಿಂದ ||೪||

ವಾಮನನಾಗಿ ನಿಸ್ಸೀಮಬಲಿಯ ಕೈಯ್ಯ ಭೂಮಿಯಳೆದುಕೊಂಡೆ ಗೋವಿಂದ |
ತಾಮರಸೋದ್ಭವಾಂಡ‌ಒಡೆದು ನಿಂದು ವ್ಯೋಮಗಂಗೆಯ ಪೆತ್ತೆ ಗೋವಿಂದ ||೫||

ವರಪರಶುಧರನಾಗಿ ಭೂಪರ ಧಿಕ್ಕರಿಸಿ ಸಂಹರಿಸಿದೆ ಗೋವಿಂದ |
ತರಹರಿಸದೆ ವಸುಂಧರೆಯನೆಲ್ಲವ ಭೂಸುರರಿಗೊಪ್ಪಿಸಿಕೊಟ್ಟೆ ಗೋವಿಂದ ||೬||

ತ್ರಿನಯನನೊಲಿಸಿದ ರಾವಣನನು ರಣಾಂಗಣದೊಳಗೊರಸಿದೆ ಗೋವಿಂದ |
ಕ್ಷಣವೆನಿಸದೆ ಮಣಿಪುರದಲಿ ವಿಭಿಷಣಗೆ ಶಾಶ್ವತವಿತ್ತೆ ಗೋವಿಂದ ||೭||

ವಾರಣದಂತವಿಧಾರಣ ಕಂಸಸಂಹಾರಣ ಭುಜಬಲ ಗೋವಿಂದ |
ವಾರಣಪುರಪತಿದಾರಣಪ್ರಿಯ ಭೂಭಾರೋತ್ತಾರಣ ಗೋವಿಂದ ||೮||

ಕಥೆಯ ನಿರ್ಮಿಸಿ ಪತಿವ್ರತೆಯರ ಬಲೂ ವ್ರತಗಲ ಕೇಡಿಸಿದ ಗೋವಿಂದ|
ಜತನದಿಂದ ತ್ರಿಪುರವ ನುರುಹಿ ದೇವತೆಗಳ ಸಲಹಿದೆ ಗೋವಿಂದ ||೯||

ವಾಜಿಯ ಮರುಕದಿ ತೇಜದಲೇರಿ ಕಾನೋಜುರಾವುತನಾದೆ ಗೋವಿಂದ |
ವಾಜಿಯ ಬೆನ್ನೊಳು ರಾಜಿಪ ಗುಣದಂತೆ ಈ ಜಗದೊಳಗಿಪ್ಪೆ ಗೋವಿಂದ ||೧೦||

ಮೇದಿನಿಗೊಸುಗ ಕಾದಿ ಕಲಹದಿ ವಿರೋಧಿಗಳನು ಕೊಂದೆ ಗೋವಿಂದ |
ಸಾಧುಗಳಿಗೆ ಸುಖವೈದಿಪ ಕಾಗಿನೆಲೆಯಾದಿಕೇಶವರಾಯ ಗೋವಿಂದ ||೧೧||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;