Sri GuruSarvabhouma DasaSahitya Project





NODIDE VEMKATA NINNA NODIDE-GURU JAGANNATHA DASARU

(Guru Jagannatha Vittala)






ನೋಡಿದೆ ವೆಂಕಟ ನಿನ್ನ ನೋಡಿದೆ ||ಪ||

ನೋಡಿದೆ ವೇಂಕಟ ನಿನ್ನ
ಕೊಂಡಾಡಿ ಬೇಡಿದೆ ವರವನ್ನ ಆಹಾ
ರೂಢಿಯೊಳಗೆ ನಿನಗೆ ಈಡುಗಾಣೆನೊ ದೇವ
ನಾಡುದೈವಗಳೆಲ್ಲ ಓಡಿಪೋದವೊ ಸ್ವಾಮಿ ||ಅ.ಪ||

ಮಣಿಗಣಮಯದ ಕಿರೀಟ ಕಪ್ಪುವರಣ
ಕುಂತಲದ ಲೋಲ್ಯಾಟ ಯುಗಕ
ರಣಕುಂಡಲ ಬಹುಮಾಟ ಅರ
ಗಿಣಿ ಶಶಿಪೊಲ್ವ ಲಲಾಟ ಆಹಾ
ಎಣೆಗಾಣೆ ಕಸ್ತೂರಿ ಮಣಿದಿರ್ಪ ಭ್ರೂಯುಗ
ಕುಣಿಯುತ ಸ್ಮರಧನು ಗಣಿಸದೊ ಎಲೋದೇವ ||೧||

ವಾರಿಜಯುಗಸಮನಯನ, ನಾಸ
ಚಾರುಚಂಪಕತೆನೆ, ವದನದೊಳು
ತೋರುವ ಸುಂದರರದನಪಂಕ್ತಿ
ಸಾರಿದಾಧರ ಬಹು‌ಅರುಣ, ಆಹಾ
ಸಾರಸಮುಖದೊಳು ಸೇರಿ ಶೋಭಿಪ ಚುಬಕ,
ಕೂರುಮಯುಗಕದಪು ಸಾರಕಟಾಕ್ಷವ ||೨||

ಕಂಧರಾಂಕಿತ ಸತ್ರಿರೇಖಾ, ಕಂಠ
ಪೊಂದಿಪ್ಪೊದ್ವರ್ತುಲಕ್ರಮೊಕ, ಕೊರಳ
ಸುಂದರಕೌಸ್ತುಭಪದಕ, ಬಹು
ಬಂಧುರ ಜೈತ್ರ ಸುರೇಖ ಆಹಾ
ಹಿಂದೆ ಸಿಂಹದ ಹೆಗಲಿನಂದದಲೊಪ್ಪಿದ
ಸ್ಕಂಧದಿ ಶೋಭಿಪ ಒಂದು ಸರಿಗೆಯನ್ನು ||೩||

ಸ್ವನ್ನ‌ಏಕಾವಳಿಹಾರಾ, ಬಾ
ವನ್ನ ಪುತ್ಥಳಿ ಸಿರಿಯಾಕಾರ, ಬಹು
ಚನ್ನವಾಗಿಹ ನಾನಾಹಾರ, ಶುಭ್ರ
ವರ್ಣಶೋಭಿಪ ಜನಿವಾರ ಆಹಾ
ಇನ್ನು ಗುಂಡಿನಮಾಲೆ, ಘನಜಲಸರಪಳಿ
ಉನ್ನತದಾನರ್ಘ್ಯ ರನ್ನಜಯಂತಿಯಾ ||೪||

ಶಿರಿವತ್ಸಲಾಂಛನಹೃದಯ, ಸುರ
ಕರಿಕರತೆರ ಬಾಹುಶಿರಿಯಾ, ನಾಲ್ಕು
ಕರಗಳೊಪ್ಪುವವೀಪರಿಯ, ಮೇಲಿ
ನ್ನೆರಡು ಹಸ್ತದಿ ಶಂಖ ಅರಿಯ ಆಹಾ
ವರರತ್ನ ಮುದ್ರಿಕೆ ಧರಿಸಿದ ಬೆರಳುಳ್ಳ
ಕರತೋಡ್ಯ ಕಡಗಕ್ಕೆ ಸರಿಗಾಣೆ ಧರೆಯೊಳು ||೫||

ಪರಮವೈಕುಂಠದಕಿಂತ ಈ
ಧರಿತಳವಧಿಕವೆನ್ನುತಾ ಬಲ
ಕರದಿಂದ ಜನಕೆ ತೋರುತಾ ಬಾಹು
ಎರಡು ಆಜಾನುಪೂರಿತಾ ಆಹಾ
ಸ್ವರಣರತ್ನಖಚಿತ ವರನಾಗಭೂಷಣ
ಧರಿಸಿ ಟೊಂಕದಿ ವಾಮಕರವಿಟ್ಟು ಮೆರೆವೋದು ||೬||

ಹಸ್ತಯುಗದಿ ತೋಡ್ಯ ಕಡಗ, ಪ್ರ -
ಶಸ್ತರತ್ನದ್ಹರಳಸಂಘ ರಚಿತ
ಸಿಸ್ತಾದ‌ಉಂಗುರ ಬೆಡಗ, ಬಹು
ವಿಸ್ತರಾಂತರ ಭುಜಯುಗ ಆಹಾ
ಹಸ್ತಿವರದ ಸಮಸ್ತಲೋಕಕೆ ಸುಖ
ವಿಸ್ತಾರ ನೀಡುತ ಸಿಸ್ತಾದ ದೇವನ ||೭||

ಉದರತ್ರಿರೇಖ ರೋಮಾಳಿ, ನಾಭಿ
ಪದುಮಶೋಭಿಪ ಗುಂಭಸುಳಿ, ಮೇಲೆ
ಉದಯಾರ್ಕ ಪೂಲುವ ಕಲೆ ಇಂದ
ಸದಮಲಾಂಬರಪಟಾವಳಿ ಆಹಾ
ಬಿದುರಶೋಭಿತ ಮಹಾಚದುರದೊಡ್ಯಾಣವು |
ಪದಕ ಮುತ್ತಿನ ತುದಿ ವಿಧವಿಧ ಪೊಳೆವೋದು ||೮||

ಕುಂಭಿಮಸ್ತಕದೋಲ್ನಿತಂಬ, ದಿಂದ
ರಂಭೆ ಪೋಲುವ ಊರುಸ್ತಂಭ, ಇಂದು
ಬಿಂಬವೆನಿಪ ಜಾನು, ಡಿಂಬ ಭಕ್ತಕ-|
ದಂಬಮೋಹಿಪ ವಿಡಂಬ ಆಹಾ
ಅಂಬುಜಾಸನಪಿತನ ತುಂಬಿದ ಮೀನ್ಜಂಘೆ
ನಂಬಿದ ಜನರನ್ನ ಇಂಬಾಗಿ ಸಲಹೋನಾ ||೯||

ಪರಡೆರಡುಮಾಣಿಕ್ಯಾವರಣ, ಪೊಳೆವ
ಕಿರುಗೆಜ್ಜೆನೂಪರಾಭರಣ ಇಟ್ಟು
ಮೆರೆವೊ ಗಂಗೆಯ ಪೆತ್ತಚರಣಯುಗ
ನಿರುತ ಭಜಿಪರೊಳತಿ ಕರುಣ ಆಹಾ
ಮರೆಯದೆ ಮಾಡುತ ಪರಿಪರಿಸೌಖ್ಯವ
ಕರೆದು ನೀಡುವನಹಿಗಿರಿವಾಸ ಶ್ರೀಶನ್ನ ||೧೦||

ಪೋತೆಂದುನಖಯುತಬೆರಳ ಸಾಲು
ದೂತತತಿಗೆ ಸುಖಗಳ ನಿತ್ತು
ನೀತಜ್ಞಾನಭಕ್ತಿಗಳ ನಿತ್ಯ
ಪ್ರೀತಿಪಡೆಯೆ ಮುಕ್ತಿಗಳ ಆಹಾ
ವಾತಗುರುಜಗನ್ನಾಥವಿಠಲನತಿ
ಪ್ರೀತಿಂದ ಪುರುಷಾರ್ಥದಾತನಾದುದು ನಿತ್ಯ ||೧೧||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;