Sri GuruSarvabhouma DasaSahitya Project





GARUDAGAMANA BAMDANO NODIRO BEGA-TANDE SRI PURANDARA DASARU

(Tande Sri Purandara Vittala)






ಗರುಡಗಮನ ಬಂದನೋ ನೋಡಿರೋ ಬೇಗ
ಗರುಡಗಮನ ಬಂದನೋ ||ಪ||

ಗರುಡಗಮನ ಬಂದ ಧರಣಿಯಿಂದೊಪ್ಪುತ |
ಶರಣಾಗತರಿಗೆ ವರಗಳ ಬೀರುತ ||ಅ.ಪ||

ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ |
ಚಿನ್ನವ ಪೋಲುವ ವಿಹಂಗದ ರಥದಲ್ಲಿ |
ಘನ್ನಮಹಿಮ ಬಂದ ಚನ್ನಮೂರುತಿ ಬಂದ |
ಸಣ್ಣಕ್ರುಷ್ಣ ಬಂದ ಬೆಣ್ಣೆಕಳ್ಳ ಬಂದ ||೧||

ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ |
ಕುಕ್ಷಿಯೊಳಗೆ ಜಗವ ಇಟ್ಟವ ತಾ ಬಂದ|
ಸೂಕ್ಷ್ಮಸ್ಥೂಲದೊಳು ಇಪ್ಪನು ತಾ ಬಂದ |
ಸಾಕ್ಷಿಭೂತ ಅವ ಸರ್ವೇಶ್ವರ ಬಂದ ||೨||

ತಂದೆಪುರಂದರವಿಠಲರಾಯ ಬಂದ |
ಬಂದು ನಿಂದು ನಲಿದಾಡುತಲಿ |
ಸಿಂಧುಶಯನ ಬಂದ ಅಂದು ಸಾಂದೀಪನ |
ನಂದನತಂದಿತ್ತಾನಂದಮೂರುತಿ ಬಂದ ||೩||

Sl No. Songs (Author)
1 Gopala Dasaru
2 Guru Jagannatha Dasaru
3 Guru Pranesha Dasaru
4 Guru Purandara Dasaru
5 Helavana Katte Griyamma
6 Indiresha Dasaru
7 Jagannatha Dasaru
8 Kanaka Dasaru
9 later
10 Pranesha Dasaru
11 Prasanna Venkata Dasaru
12 Purandara Dasaru
13 Shyama Sundara Dasaru
14 Sripada Rajaru
15 Tande Sri Purandara Dasaru
16 Vadirajaru
17 Varadendra Dasaru
18 Varadesha Dasaru
19 Vasudeva Dasaru
20 Venkata Vittala Dasaru
21 VenuGopala Dasaru
22 Vijaya Dasaru
23 Vyasarajaru
24 Vyasarayaru

&nsbp;