Rudra Devara chintante on ShivaratriMahashivarathri

Mahashivarathri is celebrated on the 13th day(Trayodashi) of Krishna paksha in the Month of Magha.
On this day, during the dusk hours (Pradosha kaala) having darshana of Manoniyamakanada Rudra (Uma-vallabha) antargatha Sri Narasimha Sankarshana provides us vishesha punya phala.
Amongst the 24 Tenors, Rudra devaru is the one who controls the Ego/Self-Pride aspect of the Tenors. We should meditate and worship Rudra devaru who is very pure like a Spatika, has 5 faces in the colors of Pink, White, Red, Black and Blue, has flocks of hair and having the crescent moon on his head as an ornament, having a snake as his necklace, hosting Ganga, who emerged from the feet of Sri Trivikrama on his head, has Parvathi devi as his consort, has Nandi/Bull as his vehicle, who gives boons to his bhaktas, who is calm and having a great body, and one who is worshipped by the PramathaGanas and Sages, one who resides in Mount Kailasa and the holy place of Varanasi.
We should picturize Rudra along with Parvathi who is mediating within the 5 pranas, Lord Sankarshana Lord Rama continuously. By doing so, we would get the blessings of the lord maharudra who comes after the parashulka trayaru and bestows us with good thoughts and positive mind.
On this Shivarathri day, we should chant this stanza with its meanings from “Sri Harikathamrutha sara” a Magnum opus work of Sri Jaganatha Dasaru, who has simplified the teachings of Srimad Acharyara into simple Kannada form and make our efforts successful.

" ಮಹಾಶಿವರಾತ್ರಿ "

ಮಾಘ ಮಾಸ ಕೃಷ್ಣ ತ್ರಯೋದಶೀ 'ಮಹಾಶಿವರಾತ್ರಿ' ಎಂದು ಕರೆಸಿಕೊಳ್ಳುತ್ತದೆ. ಈ ದಿನ ಪ್ರದೋಷಕಾಲದಲ್ಲಿ ಮನೋನಿಯಾಮಕನಾದ ಉಮಾವಲ್ಲಭ ರುದ್ರದೇವರ ಅಂತರ್ಗತನಾದ ನರಸಿಂಹಾಭಿನ್ನ ಸಂಕರ್ಷಣನ ದರ್ಶನದಿಂದ ವಿಶೇಷ ಪುಣ್ಯ ಫಲ ದೊರಕುವುದು. ಇಪ್ಪತ್ತನಾಲಕು ತತ್ವಗಳಲ್ಲಿ ಅಹಂಕಾರ ತತ್ವಕ್ಕೆ ಅಭಿಮಾನಿಯಾದ ಮಹರುದ್ರದೇವರನ್ನು - "ಸ್ಫಟಿಕದಂತೆ ಶುಭ್ರವರ್ಣನೂ,ನಸುಗೆಂಪು -ಬಿಳಿ- ಕೆಂಪು -ಕಪ್ಪು -ನೀಲ ವರ್ಣದ ಐದು ಮುಖಗಳುಳ್ಳವನೂ, ಜಟಾಜೂಟಧರನು ಹಾಗೂ ಚಂದ್ರಕಲೆಯನ್ನು ಧರಿಸಿದವನೂ , ಸರ್ಪಮಾಲಾ ಆಭರಣ ಭೂಷನೂ ತ್ರಿವಿಕ್ರಮನ ಪಾದೋದ್ಭವೆಯಾದ ಗಂಗೆಯನ್ನು ಧರಿಸಿದವನೂ ಪಾರ್ವತೀ ಸಮೇತನೂ ಹಾಗೂ ನಂದಿವಾಹನನೂ ಭಕ್ತಾಭೀಷ್ಟ ಪ್ರದಾಯಕನೂ ಹಾಗೂ ಪ್ರಸನ್ನಚಿತ್ತನೂ ಮುಕುತಿಪಥಕೆ ಮನವೀವ ಭವ್ಯಾಕಾರನೂ - ಪ್ರಮಥ ಸುರಮುನಿಗಣ ಗಳಿಂದ ಸಂಸೇವಿತನಾದ ಕೈಲಾಸ -ವಾರಣಾಸೀಪುರವಾಸನ ಭವ್ಯರೂಪವನ್ನು ಧ್ಯಾನಿಸಬೇಕು. ಇಂತಹಾ ಮಹರುದ್ರದೇವರು ಪಾರ್ವತೀ ಸಮೇತರಾಗಿ ಸರ್ವದಾ ಪಂಚಪ್ರಾಣಾಂತರ್ಗತ ಸಂಕರ್ಷಣಾತ್ಮಕ ಶ್ರೀ ರಾಮನಾಮಧ್ಯಾನದಲ್ಲಿ ನಿರತರಾಗಿರುವರೆಂದು ಧ್ಯಾನಿಸಿದರೆ ಪರಶುಕ್ಲತ್ರಯರ ನಂತರದಲ್ಲಿ ಐಹಿಕಾಮುಷ್ಮಿಕ ಪ್ರದಾತರಾದ ಮಹಾರುದ್ರದೇವರು ಪ್ರೀತರಾಗಿ ಅನುಗ್ರಹಿಸುವರು ಎಂಬುದು ಆರ್ಯರ ಮತ.
ಆಚಾರ್ಯರ ಭಾವವನ್ನು ಅತಿಸರಳವಾಗಿ ತಿಳಿಗನ್ನಡದಲ್ಲಿ ತಿಳುಹಿದ ಜಗನ್ನಾಥ ದಾಸರ ಹರಿಕಥಾಮೃತಸಾರದ ಈ ಶ್ಲೋಕಗಳನ್ನು ಅರ್ಥನುಸಂಧಾನದಿಂದ ಪಾರಾಯಣ ಮಾಡಿದಲ್ಲಿ ಶಿವರಾತ್ರಿಯ ಆಚರಣೆಯು ಸಾರ್ಥಕವೆನಿಸುತ್ತದೆ.

।। ಶ್ರೀ।। ವಾಮದೇವ ವಿರಿಂಚಿತನಯ
ಉಮಾಮನೋಹರ ಉಗ್ರ ದೂರ್ಜಟಿ
ಸಾಮಜಾಜಿನ ವಸನಭೂಷಣ ಸುಮನಸೋತ್ತಂಸ ।।
ಕಾಮಹರ ಕೈಲಾಸಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವಾ ।।೧।।

ಕೃತ್ತಿವಾಸನೆ ಹಿಂದೆ ನೀ ನಾ -।
ಲ್ವತ್ತು ಕಲ್ಪ ಸಮೀರನಲಿ ಶಿ- ।
ಷ್ಯತ್ವ ವಹಿಸಿ ಅಖಿಲಾಗಮಾರ್ಥಗಳೋ ದಿ ಜಲಧಿಯೊಳು ।।
ಹತ್ತು ಕಲ್ಪದಿ ತಪವ ಗೈದಾ-।
ದಿತ್ಯರೊಳಗುತ್ತಮನೆನಿಸಿದ ।
ಪುರುಷೋತ್ತುಮನ ಪರ್ಯಂಕ ಪದವೈದಿದೆಯೋ ಮಹದೇವ ।।
ನಂದಿವಾಹನ ನಳಿನಿಧರ ।
ಮೌಳೇ೦ದು ಶೇಖರ ಶಿವ ತ್ರಯಂಬಕ ।
ಅಂಧಕಾಸುರ ಮಥನ ಗಜ ಶಾರ್ದೂಲ ಚರ್ಮಧರ ।।
ಮಂದಜಾಸನ ತನಯ ತ್ರಿಜಗ ।
ದ್ವಂದ್ಯ ಶುದ್ಧ ಸ್ಫಟಿಕ ಸನ್ನಿಭ ।
ವಂದಿಸುವೆನನವರತ ಪಾಲಿಸು ಪಾರ್ವತೀ ರಮಣ ।।

ಫಣಿ ಫಣಾ೦ಚಿತ ಮುಕುಟರಂಜಿತ ।
ಕ್ವಣಿತ ಡಮರು ತ್ರಿಶೂಲ ಶಿಖಿ ।
ದಿನಮಣಿ ನಿಶಾಕರನೇತ್ರ ಪರಮಪವಿತ್ರ ಸುಚರಿತ್ರ ।।
ಪ್ರಣತಕಾಮದ ಪ್ರಮಥಸುರಮುನಿ ।
ಗಣ ಸುಪೂಜಿತ ಚರಣಯುಗ ।
ರಾವಣಮದವಿಭಂಜನ ಸತತ ಮಾಂಪಾಹಿ ಮಹಾದೇವ ।।

ದಕ್ಷಯಜ್ಞ ವಿಭ೦ಜನನೆ ।
ವಿರೂಪಾಕ್ಷ ವೈರಾಗ್ಯಾಧಿಪತಿ।
ಸಂರಕ್ಷಿಸೆನ್ನನು ಸರ್ವಕಾಲದಿ ಸಂಮುದವನಿತ್ತು ।।
ಯಕ್ಷಪತಿ ಸಖ ಯಜಪರಿಗೆ ।
ಸುರವೃಕ್ಷ ವೃಕದನುಜಾರಿ ।
ಲೋಕಾಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು ।।

ಹತ್ತು ಕಲ್ಪದಿ ಲವಣಜಲಧಿಯೊ-।
-ಳುತ್ತಮಶ್ಲೋಕನ ವೊಲಿಸಿ ।
ಕೃತಕೃತ್ಯನಾಗಿ ಜಗತ್ಪತಿಯ ನೇಮದಿ ಕುಶಾಸ್ತ್ರಗಳ ।।
ಬಿತ್ತರಿಸಿ ಮೋಹಿಸಿ ದುರಾತ್ಮರ।
ನಿತ್ಯ ನಿರಯನಿವಾಸನೆನಿಸುವ ।
ಕೃತ್ತಿವಾಸಗೆ ನಮಿಪೆ ಶೇಷಪದಾರ್ಹನಹುದೆಂದು ।।

" ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ - ಕೈಲಾಸವಾಸ ಗೌರೀಶ ಈಶ"

।। ಉಮಾವಲ್ಲಭ ರುದ್ರಾ೦ತರ್ಗತ ಭಾರತೀ ರಮಣಾಂತರ್ಗತ ಶ್ರೀ ಜಯಾಪತಿ ಸಂಕರ್ಷಣಾರ್ಪಣಾಮಸ್ತು ।।

Article : Sri Ramakanth Manvi, Mantralayam
Translation : Sri Prasanna BR, Bangalore
Photograph : Sri Srinidhi Karanam, Mantralayam