Visit to Bijapurಪರಮಪೂಜ್ಯ ಶ್ರೀಪಾದಂಗಳವರು ದಿನಾಂಕ 11.12.2017 ರಂದು ವಿಜಯಪುರ ನಗರಕ್ಕೆ ದಿಗ್ವಿಜಯ ಮಾಡಿದರು. ನಗರದ ದೀವಟಗೇರಿ ಗಲ್ಲಿಯ ರಾಯರಮಠದಲ್ಲಿ ಶಂಕುಸ್ಥಾಪನೆ, ಉಚಿತವೈದ್ಯಕೀಯ ನೇತ್ರತಪಾಸಣೆ ಮತ್ತಿತರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬ್ರಹ್ಮಕರಾರ್ಚಿತ ಶ್ರೀಮನ್ಮೂಲರಾಮದೇವರ ಸಂಸ್ಥಾನ ಪೂಜೆ ವೈಭವದಿಂದ ನೆರವೇರಿತು, ನೂರಾರು ಜನ ಭಕ್ತರು ವಿವಿಧೆಡೆಗಳಿಂದ ಆಗಮಿಸಿ ಪೂಜ್ಯ ಶ್ರೀಪಾದಂಗಳವರಿಂದ ಆಶೀರ್ವಾದ ಪಡೆದರು.