Madhyaradhana of Shri PadmanabhaTeertharu - Navabrindavanaಶ್ರೀ ಪದ್ಮನಾಭ ತೀರ್ಥರ ಮಧ್ಯಾರಾಧನಾ ಮಹೋತ್ಸವಾಂಗವಾಗಿ(17-11-2017) ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಹ್ವಾನದ ಮೇರೆ ಶ್ರೀಮನ್ಮಾಧವ ತೀರ್ಥರ ಮಠದ ಹಿರಿಯ ಹಾಗೂ ಕಿರಿಯ ಪೀಠಾಧಿಪತಿಗಳು ನವವೃಂದಾವನಕ್ಕೆ ದಿಗ್ವಿಜಯ ಮಾಡಿಸಿದರು. ಪರಮಪೂಜ್ಯ ಶ್ರೀಪಾದಂಗಳವರು ಹಾಗೂ ವಿದ್ವಾಂಸರುಗಳಿಂದ ಉಪನ್ಯಾಸ ಕಾರ್ಯಕ್ರಮ ನಡೆಯಿತು.ನಂತರದಲ್ಲಿ ಶ್ರೀಮಠದ ಹಾಗೂ ಮಾಧವತೀರ್ಥರ ಮಠದ ಸಂಸ್ಥಾನಪೂಜೆಯು ಶ್ರೀ ಪದ್ಮನಾಭ ತೀರ್ಥರ ಸನ್ನಿಧಿಯಲ್ಲಿ ನೆರವೇರಿತು.ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀಮನ್ಮೂಲರಘುಪತಿವೇದವ್ಯಾಸದೇವರು ಹಾಗೂ ಶ್ರೀಪದ್ಮನಾಭ ತೀರ್ಥರಿಗೆ ಕನಕಾಭಿಷೇಕ ನೆರವೇರಿಸಿದರು. ಸಾವೆರಾರು ಜನ ಭಕ್ತರು ಆರಾಧನಾ ಮಹೋತ್ಸವಕ್ಕೆ ಆಗಮಿಸಿದ್ದರು