Tungarathi - Punya Nadi Harati @ Mantralayamಕಾರ್ತೀಕ ಮಾಸದ ಹುಣ್ಣಿಮೆಯ ಪರ್ವಕಾಲದ ನಿಮಿತ್ತವಾಗಿ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ವೈಭವದಿಂದ ಜರುಗಿದವು. ಸಾಯಂಕಾಲ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ೧೦೦೮ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಂಸ್ಥಾನ ಸಮೇತವಾಗಿ ನಾನಾ ವಿಧ ವಾದ್ಯ ವೈಭವಗಳಿಂದ ಮೆರವಣಿಗೆಯ ಮುಖಾಂತರ ಶ್ರೀ ಗುರುರಾಜರನ್ನು ತುಂಗಭದ್ರಾನದಿತೀರಕ್ಕೆ ಕರೆತಂದು ಶ್ರೀಗುರುರಾಜರಿಗೆ ಹಾಗೂ ತುಂಗಭದ್ರೆಗೆ ವಿಶೇಷ ಪೂಜೆ ಹಾಗು ಪುಣ್ಯನದಿ ಆರತಿಯನ್ನು ನೆರವೇರಿಸಿದರು . ನಂತರದಲ್ಲಿ ನದಿತೀರ -ಶ್ರೀಮಠದ ಆವರಣ ಹಾಗು ಪ್ರಾಂಗಣದಲ್ಲಿ ದೀಪೋತ್ಸವವನ್ನು ನಡೆಸಲಾಯಿತು. ಸಹಸ್ರಾರು ಭಕ್ತರು ಆಗಮಿಸಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯರಾದರು.